The Elephant · al-Fil · سورة الفيل · 5 ayahs

بِسْمِ اللَّهِ الرَّحْمَٰنِ الرَّحِيمِ

ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.

أَلَمْ تَرَ كَيْفَ فَعَلَ رَبُّكَ بِأَصْحَابِ الْفِيلِ

ನಿಮ್ಮ ಪರಿಪಾಲಕನು (ಅಲ್ಲಾಹು) ಆನೆಯ ಜನರೊಡನೆ ಹೇಗೆ ವರ್ತಿಸಿದನೆಂದು ನೀವು ನೋಡಿಲ್ಲವೇ?

أَلَمْ يَجْعَلْ كَيْدَهُمْ فِي تَضْلِيلٍ

ಅವನು ಅವರ ತಂತ್ರವನ್ನು ವಿಫಲಗೊಳಿಸಲಿಲ್ಲವೇ?

وَأَرْسَلَ عَلَيْهِمْ طَيْرًا أَبَابِيلَ

ಅವನು ಅವರ ಮೇಲೆ ಹಕ್ಕಿಗಳನ್ನು ಹಿಂಡು ಹಿಂಡಾಗಿ ಕಳುಹಿಸಿದನು.

تَرْمِيهِمْ بِحِجَارَةٍ مِنْ سِجِّيلٍ

ಅವು ಸುಟ್ಟ ಜೇಡಿಮಣ್ಣಿನ ಕಲ್ಲುಗಳನ್ನು ಅವರ ಮೇಲೆ ಎಸೆಯುತ್ತಿದ್ದವು.

فَجَعَلَهُمْ كَعَصْفٍ مَأْكُولٍ

ನಂತರ ಅವನು ಅವರನ್ನು (ಜಾನುವಾರುಗಳು) ತಿಂದ ಒಣಹುಲ್ಲಿನಂತೆ ಮಾಡಿದನು.